ಸ್ಮಾರ್ಟ್ ಬೆಂಗಳೂರು ಇನ್ಫ್ರಾಸ್ಟ್ರಕ್ಚರ್ ಅಂಡ್ ಕರ್ನಾಟಕ ಸ್ಟೇಟ್ ಗೋವೆರ್ನ್ಮೆಂಟ್ ಎಂಪ್ಲಾಯೀಸ್ ಹೌಸಿಂಗ್ ಕೋ ಅಪರೇಟಿವ್ ಸೊಸೈಟಿ ಲಿಮಿಟೆಡ್ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಸೆಪ್ಟೆಂಬರ್ ತಿಂಗಳಲ್ಲಿ ಸಂಘದ ಅಧ್ಯಕ್ಷರು ಹಾಗೂ ಉಪದಕ್ಷ್ಯರ ನೇತೃತ್ವದಲ್ಲಿ ಸಂಘದ ಎಲ್ಲಾ ನಿರ್ದೇಶಕರ ಜೊತೆಯಲ್ಲಿ ಪ್ರಸ್ತುತವಿದ್ದ ಸಂಘದ ಸದಸ್ಯರೊಂದಿಗೆ ನಡೆಸಲಾಯಿತು.
ಸದಸ್ಯತ್ವ, ವಾರ್ಷಿಕ ಲಾಭ ನಷ್ಟದ ಪಟ್ಟಿ, ವಾರ್ಷಿಕ ಲೆಕ್ಕ ಪರಿಶೋಧನ ವಿವರ ಮತ್ತು ಅನುಸರಣೆ, ಭೂಖರೀದಿಹಾಗೂ ಕಾರ್ಯನಿರ್ವಹಣ, ಭೂ ಅಭಿವೃದ್ಧಿ ಮತ್ತು ಪ್ರಗತಿ, ದೈನಂದಿನ ಕಾರ್ಯ ಕಲಾಪ, ಚಟುವಟಿಕೆ, ಪ್ರಕ್ರಿಯೆ ಹಾಗೂ ಸುಧಾರಣೆ ಇವು ಮುಂತಾದವು ಮಹಾಸಭೆಯ ಚರ್ಚೆಯ ಮುಖ್ಯಾಂಶಗಳಗಿದ್ದವು.
ಬೆಂಗಳೂರಿನ ಉತ್ತರ ವಲಯವು ಅತಿ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದ್ದು ತಮ್ಮ ಸಂಘದ ಯೋಜನೆಗಳನ್ನು ಈ ವಲಯದಲ್ಲಿ ನಿರ್ಮಿಸುತ್ತಿರುವುದು ಅತ್ಯಂತ ಸೂಕ್ತವಾದ ವಿಷಯವೆಂದು ಸಭೆಯಲ್ಲಿ ಚರ್ಚಿಸಲಾಯಿತು. ಅನೇಕ ಖಾಸಗಿ ಮತ್ತು ಸರ್ಕಾರದ ಯೋಜನೆಗಳು ಈ ವಲಯದಲ್ಲಿ ನಿರ್ಮಿಸಲ್ಪಡುತ್ತಿದ್ದು ಇಲ್ಲಿನ ಪ್ರದೇಶಕ್ಕೆ ಬೇಡಿಕೆ ಹೆಚ್ಚಾಗಿರುತ್ತದೆ. ಅಂತೆಯೇ ತಮ್ಮ ಯೋಜನೆಯ ಬೆಲೆ 2019 ರ ಪ್ರಾರಂಭದಲ್ಲಿ ಇದ್ದ ರೂ. 981/- sq ft ಪ್ರಸ್ತುತವಾಗಿ ರೂ. 1161/- sq ft ಗೆ ಬೆಲೆ ಏರಿಕೆಯಾಗಿದ್ದು ಮುಂಬರುವ ತಿಂಗಳಲ್ಲಿ ಮತ್ತಷ್ಟು ಏರಿಕೆಯಾಗುವಂತೆ ಸೂಚನೆಯಲ್ಲಿದೆ ಎಂದು ತಿಳಿಸಿದರು. ಈ ಬೇಡಿಕೆಯನ್ನು ಈಡೇರಿಸುವ ಸಲುವಾಗಿ ಕರ್ನಾಟಕದ ರಾಜ್ಯ ಸರ್ಕಾರವು ಈ ವಲಯದ ಗೈಡೆನ್ಸ್ ವ್ಯಾಲು ಅನ್ನು ಸರಾಸರಿ ರೂ. 335/- sq ft ರಷ್ಟು ಏರಿಕೆ ಮಾಡುವುದಾಗಿ ನಿರ್ಧರಿಸಿದೆ. ಇದರಿಂದ ಸಂಘದ ಯೋಜನೆಗಳ ಬೆಲೆಯು ಏರಿಕೆಗೊಳ್ಳುವುದಾಗಿ ಸಭೆಯಲ್ಲಿ ಚರ್ಚಿಸಲಾಯಿತು.
ಅಂತೆಯೇ ಆಡಳಿತ ಮಂಡಳಿಯು, ಸದಸ್ಯರಲ್ಲಿ ಈ ಅವಕಾಶವನ್ನು ಉಪಯೋಗ ಪಡಿಸಿಕೊಂಡು ನಿವೇಶನಗಳನ್ನು ಖರೀದಿ ಮಾಡುವುದಾಗಿ ವಿನಂತಿಸಿದರು.
ಕೊನೆಯದಾಗಿ ಸಂಘದ ಅಧ್ಯಕ್ಷರು, ಉಪದಕ್ಷ್ಯರು ಹಾಗೂ ನಿರ್ದೇಶಕರು ಸಭೆಯಲ್ಲಿ ಪ್ರಸ್ತುತವಿದ್ದ ಎಲ್ಲಾ ಸದಸ್ಯರಲ್ಲಿ ತಮ್ಮ ಬೆಂಬಲ ಮತ್ತು ಸಹಕಾರಕ್ಕಾಗಿ ಕೃತಜ್ಞತೆ ಮತ್ತು ಧನ್ಯವಾದಗಳನ್ನು ಅರ್ಪಿಸಿದರು.
Published: Vijaya Taranga Newspaper
Date: 20-11-2023